Monday, February 8, 2010

There is no market for your sarrows

ತೊಂದರೆಗಳು ಹೇಗೆ ಆವರಿಕೊಳ್ಳುತ್ತವೆ ಅಂತ ತಿಳಿಯುವುದೇ ಇಲ್ಲ. ಎಲ್ಲ ಸರಿ ಇದೆ ಅಂದು ಕೊಂಡು ಎದ್ದ ದಿನದ ಕೊನೆ, ಯಾವುದು ಆಜ್ಞಾತ ದಡಕ್ಕೆ ತಂದು ಬಿಟ್ಟು, ಕಣ್ಣೂ ಕಟ್ಟಿ "ಇಲ್ಲಿಂದ ನೋಡು, ನೀನುಂಟು ನಿನ್ನ ಪಾಡುಂಟು" ಅಂತ ಯಾರೋ ಬಿಟ್ಟು ಹೊರಟು ಹೋದಂತಾಗುತ್ತದೆ. ಸ್ವಲ್ಪ ಬುದ್ದಿವಂತಿಕೆ ಇದ್ರೆ, ತೊಂದ್ರೆಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ ಅನ್ನುವುದು ಲೋಕ ರೂಡಿ. ನಾನು ಹಾಗೆ ಅಂದು ಕೊಂಡಿದ್ದೆ. ನಾವೆಷ್ಟೇ ಬುದ್ದಿವಂತಿಕೆ ಇಟ್ಟುಕೊಂಡಿದ್ದರೂ, ನಮಿಗಿಂತ ಹತ್ತು ನಡೆ ಮುಂದಾಲೋಚಿಸಿ ನಡೆಸುವ ನಮ್ಮ ಬದುಕು, ಎಲ್ಲೋ ನಮ್ಮ ನ್ನ ಹಿಡಿದು ನಿಲ್ಲಿಸಿ "ಚೆಕ್ ಮೇಟ್" ಅನ್ನುತ್ತೆ.


ಬೆಳಿಗ್ಗೆ ಯಾರೋ ಎಸ್ ಎಮ್ ಎಸ್ ಕಳಿಸಿದ್ದರು. "There is no market for your sarrows. No one will buy them. So never advertise your feelings just display your attitude"
 ಬಹಳ ನಿಜ ಅನ್ನಿಸಿತು.

ಆದರೆ, ತೊಂದರೆಗಳು ಬಂದಾಗ ಆಗುವ ಒಂದು ಉಪಯೋಗ ಅಂದ್ರೆ, ನಮ್ಮ ಎಲ್ಲಾ ಇಂದ್ರಿಯಗಳು ತಮ್ಮ ಕಾರ್ಯಗಳ ಸದುಪಯೋಗಕ್ಕೆ ನಿಲ್ಲುತ್ತವೆ. ಕ್ರಿಯೇಟಿವಿಟಿ ಹಾದಿತಪ್ಪುವುದಿಲ್ಲ. ಬದುಕಿನ ಭಯ, ನಮಗೆ ಗೊತ್ತಿಲ್ಲದೇ ನಮ್ಮನ್ನ ಇನ್ನಷ್ಟು "ಪ್ರಿಪೇರ್ಡ್" ಅಗಿಸುತ್ತದೆ. ಆಗಲಿ...

ಹುಟ್ಟಿಸಿದಾ ಸ್ವಾಮಿ ಹೊಣೆಗಾರನಾಗಿರಲು, ಕೊಟ್ಟು ರಕ್ಷಿಪನವನು ಇದಕೆ ಸಂಶಯವಿಲ್ಲ ಅಂತ ದಾಸರೇ ಹೇಳಿದ್ದಾರಲ್ಲ. :)

1 comment:

~mE said...

monne monne yarigo hayltha idday...never tell ur problems to anyone..80% would say you deserve and 20% dont care :)

so yen aithu hayli...naanu a 100% race alli illa :)

Related Posts with Thumbnails