"ಯಾಕೆ ಏನಾಯಿತು? ಬೆಂಗಳೂರಲ್ಲಿ ಟ್ರಾಫಿಕ್ ನಾದ್ರು ಪ್ರೆಡಿಕ್ಟ್ ಮಾಡ್ಬಹುದು..ನಿನ್ನ ಮೂಡ್ ಮಾತ್ರ ಗೊತ್ತೆ ಆಗಲ್ಲ"
"........"
"ನೋಡು ಹಿಂಗೇ ಮಾತಾಡ್ದೆ ಕೂತಿದ್ರೆ, ಇಲ್ಲಿ ಹುಲ್ಲು ಬೆಳಿಯಕ್ಕೆ ತೊಂದ್ರೆ ಆಗಿ...ನೀನು ಕೂತಿರೊ ಅಷ್ಟು ಜಾಗ ಮಾತ್ರ ಒಂದು ಬಿಳೀ ಪ್ಯಾಚ್ ಆಗಿ...ಲಾನ್ ಎಲ್ಲಾ ಗಲೀಜಾಗಿ ಕಾಣುತ್ತೆ ಹ ಹ ಹ"
"......."
"ಸರಿ...ತಮಾಷಿ ಮಾಡಲ್ಲ..ಹೇಳು."
"ಹೋಗೋ, ನಿನಿಗೆಲ್ಲಾ ಅರ್ಥನೇ ಅಗಲ್ಲ. ಏನೋ ಎರಡು ಮಾತು ಆಡಿ ಸಮಾಧಾನ ಮಡ್ತಾನೆ ಅಂತ ಕರ್ದ್ರೆ...ತಮಾಷಿ ಮಾಡ್ತೀಯ"
"ನೋಡು....ನಿನಿಗೆ ನೀನೇ, ನಿನ್ನ ತಲೇ ಮೇಲೆ ಮೋಡ ಕವುಚಿಕೊಂಡು...ನಿತ್ಯ ಮಾನ್ಸೂನ್ ಮಾಡಿಕೊಂಡಿದ್ದೀಯ. ತಲೇ ಮೇಲೆ ಕೈ ಆಡಿಸಿ...ಮೋಡ ಪಕ್ಕಕ್ಕೆ ತಳ್ಳೀ...ಸೂರ್ಯನ್ನ ನೋಡು. ಯಾರೋ ಏನೋ ಅಂದ್ರು ಅಂತ ಎಷ್ಟು ತಲೆ ಕೆಡಿಸಿಕೋಳ್ತೀಯ?ನೀನಂತು...ಮಾತಿಗೆ ಅವಮಾನ ಮಾಡೋ ಅಷ್ಟು ಮೌನ ಆಚರಿಸ್ತೀಯ...ನನ್ನ ಕೈಲಿ ಇದನ್ನ ನೋಡಕ್ಕೆ ಆಗಲ್ಲ."
"ನಿನಿಗೇನ್ಗೊತ್ತು ನನ್ನ ಕಷ್ಟ"
"ಹೇಳ್ಕೊಂಡ್ರೆ ತಾನೆ ಗೊತ್ತಾಗೋದು"
"ನೋಡು, ನಿನ್ನ ಫ್ರೆಂಡು, ಮೊನ್ನೆ ಹಬ್ಬಕ್ಕೆ ಅವನಿಗೆ ಅಂತ ಹುಡುಕಿ ಹುಡುಕಿ ಷರ್ಟ್ ತೆಗೆದು ಕೊಟ್ರೆ, ನನ್ನ ನೋಡಕ್ಕೆ ಬಂದಾಗ ಅದನ್ನ ಹಾಕೊಂಡೇ ಬಂದಿರ್ಲಿಲ್ಲ. ನಾನು ನಮ್ಮ ಅಣ್ಣನ ಷರ್ಟ್ ಕೂಡ ಅಷ್ಟು ಆಸೆ ಪಟ್ಟು ಹುಡುಕಿರಲಿಲ್ಲ."
"ಹೊ! ಅದಾ ವಿಷ್ಯ....ಏನೆ, ಚಿಕ್ಕ ಚಿಕ್ಕದಕ್ಕೆಲ್ಲಾ......"
"ಅದು ಚಿಕ್ಕದ ನಿನಗೆ....."
"ಸರಿ, ನಾನೆ ಅವನಿಗೆ ಫೋನ್ ಮಾಡಿ ವಿಚಾರಿಸ್ಕೋಳ್ತೇನೆ ತಾಳು"
ಡಯಲ್ ಡಯಲ್ ಡಯಲ್.....
"ಗುರೂ...ನಾನ್ ನಮ್ಮ ವಿಪಿ ಜೊತೆ ಸೈಟ್ ವಿಸಿಟ್ ನಲ್ಲಿದ್ದೀನಿ ಆಮೇಲ್ ಮಾಡ್ಲ?"
"ಹೆ..ನೀನೆಲ್ಲಾದ್ರು ಇರು...ಈ ಹುಡುಗಿ ನನ್ನ ಪಕ್ಕ ಕೂತ್ ತಲೆ ತಿನ್ತಾಇದೆ.ಮೊದಲು...."
"ಗೊತ್ತು ಗೊತ್ತು...ನಾನು ಅವಳು ಕೊಡ್ಸಿದ್ದ ಷರ್ಟ್ ಹಾಕೊಂಡಿಲ್ಲ ಅಂತ ಮುನಿಸ್ಕೊಂಡಿದ್ದಾಳೆ. ಈಗಲೇ ಹಿಂಗೆ ಆಮೇಲೆ ಮದುವೆ ಆದ ಸ್ವಲ್ಪ ದಿನಕ್ಕ ಎಲ್ಲಾ ಬೊರ್ ಆದ ಮೇಲೆ ನೀನು ನನ್ನನ್ನ ಕೇರೆ ಮಾಡಲ್ಲಾ...ಹಂಗೆ ಹಿಂಗೆ ಅಂತ ಫಾಸ್ಟ್ ಫಾರ್ವರ್ಡ್ ಆಗಿ ಹೋಗಿ ತಲೆ ತಿಂದ್ಲು ಗುರು"
"ಹಮ್..ಸರಿ ನೀನು ಯಾಕೆ ಷರ್ಟ್ ಹಾಕೊಳಿಲ್ಲ? ನಿನಿಗೇನು ಕೊಬ್ಬು.."
"ಹೂಂ..ಅದೇ.... ಕೊಬ್ಬು... ಜಾಸ್ತಿ ಆಗಿ..ನಾನು ಸ್ವಲ್ಪ ದಪ್ಪ ಆಗಿದ್ದೀನಿ ಅನ್ಸುತ್ತೆ...ಅವಳು ತಂದ ಷರ್ಟು ಫುಲ್ ಟೈಟು ಮಾರಾಯ. ಅದಕ್ಕೆ ಹಾಕೊಳ್ಳಕ್ಕೆ ಆಗಲಿಲ್ಲ. ಅದನ್ನ ಅವಳಿಗೆ ಹೇಳಿದ್ರೆ ಒಪ್ಪಲ್ಲ. ಏನ್ಮಾಡ್ಲಿ ನೀನೆ ಹೇಳು"
"ಹ ಹ ಹ ಸರಿ ಸರಿ ನಾನು ಹೇಳ್ತೀನಿ ತಾಳು..ನೀನು ಕೆಲಸ ಮಾಡು."
ಫೋನ್ ಕಟ್....
"ಏ ಕುಡುಮಿ ತರಹ ಕೂತಿದ್ಯಲ್ಲ...ಆ ಹುಡಗ ಹೇಳಿದ್ದನ್ನ ಏನಾದ್ರು ಕೇಳಿಸ್ಕೋಂಡ್ಯ...? ಹೋಕ್ಕೊಳ್ಳಿ...ಇತ್ತೀಚೆಗೆ ಅವನ್ನನ್ನ ಒಂದು ಸಲಾನಾದ್ರು ಆಪ್ಪಿಕೊಂಡಿದ್ದೀಯ?"
"ಚಿ....ಏನ್ಮಾತಾಡ್ತ ಇದ್ದೀಯ ನೀನು"
"ಮತ್ತಿನ್ನೇನು...ಅವನ ಸೈಜು ಗೊತ್ತಿಲ್ಲದೆ ಷರ್ಟ್ ತಂದು ಕೊಟ್ರೆ ಆಗೊಯಿತ...ಅದು ಅವನಿ ಫುಲ್ ಟೈಟ್ ಅಂತೆ...ಗುಂಡಿ ಬಿಗಿಯೋ ಆಷ್ಟು....ಪೆದ್ದಿ ನೀನು...ಸುಮ್ಮ ಸುಮ್ಮನೆ ಮುನಿಸ್ಕೋಂಡು ಸಂಬಂಧ ಹಾಳ್ಮಾಡ್ತೀಯ..ಮೊದಲು ಅವನನ್ನ ಒಂದು ಸರಿ ಬಿಗಿ ತಬ್ಬಿ ಕೊಂಡು, ಆಮೇಲೆ ಎಕ್ಸ್ಛೇಂಜ್ ಮಾಡ್ಸಕ್ಕೆ ಹೋಗು"
"........ಮೌನ....ನಾಚಿಕೆ........"
"ಸರಿ ನಾನು ಹೊರಟೆ...ಎಲ್ಲಿಗೆ ಡ್ರಾಪ್ ಮಾಡ್ಲಿ ಹೇಳು"
ಕೆನ್ನೆ ಉಬ್ಬಿಸಿ...
"ಏನು ಬೇಡ...ನಾನೆ ಹೋಗ್ತೀನಿ...ಅವನು ಎಲ್ಲಿದ್ದಾನಂತೆ...?"
"ಪುನಃ ನಕರಾ ನೋಡು...ನೀನೆ ಫೊನ್ ಮಾಡಿ ಕೇಳೂ..ಏನ್ ಬಿಗು ಮಾನನಪ್ಪ ಹುಡ್ಗೀರ್ದು..ಸರಿಯಾಗಿ ಪ್ರೀತಿ ಮಾಡಕ್ಕೆ ಬರಲ್ಲ..ಕೋಪ ಮಾತ್ರ ಬರುತ್ತೆ..."
3 comments:
ಈ ನವಿರಾದ ಕಥೆ ತಮ್ಮ ಕಲ್ಪನೆನ? ಸೊಗಸಾಗಿದೆ
Houdu nande ondu sanna prayathna :)
ಬಿಡಿ....ನೀವು ಒಳ್ಳೆ ಛಾಯಾಗ್ರಾಹಕರು , ಕವಿಗಳು ಅಂಡ್ ಆಫ್ ಕೋರ್ಸ್...ರಸಿಕ ಶಿರೋಮನಿಯು ಅಹುದು
Post a Comment