"ನಾನು ಅಲ್ಲೆ ಮರದ ಕೆಳಗೆ ಜೋಕಾಲಿ ಆಡಲಿಕ್ಕೆ ಹೋಗಿದ್ದೆ ಮಾಮ. ಮೊದಲು ಎಣಿಸಿದೆ ಅದು ಮರದ ಬಳ್ಳಿಯೇ ಇರಬೇಕು ಅಂತ. ನಂತರ ನಾನು ಸ್ವಲ್ಪ ಸಪ್ಪಳ ಮಾಡುವಾಗ ಅದು ಇಷ್ಟು ದೊಡ್ಡ ಜಡೆ ತೆಗೆದು ನಿಂತಿತು. ನಂಗೆ ಹೆದ್ರಿಕೆ ಆಯ್ತು ಅಂಗಳಕ್ಕೆ ಓಡಿ ಬಂದೆ"
ಮೊನ್ನೆ ಊರಿಗೆ ಹೋಗಿದ್ದೆ, ಇಷ್ಟುದ್ದ ಕಣ್ಣಗಲಿಸಿ ತನ್ನೆಲ್ಲ ಭಯವನ್ನು ಮುಖದಲ್ಲಿ ತಂದು
ವಿವರಿಸುತ್ತಿದ್ದ ನಮ್ಮ ಸೌರಭ. ನನ್ನ ಆತ್ಮೀಯ ಸ್ನೇಹಿತ ನಾಗರಾಜರ ಮಗ.
"ಅಲ್ಲ ಬಟ್ರೆ, ನೀವು ಏನೂ ಮಾಡಲಿಲ್ವ? ಅಷ್ಟು ದೊಡ್ಡ ನಾಗರ ಹಾವು ಕಂಡೆ ಅಂತೀರಿ, ಏನಾದ್ರೂ ತೊಂದರೆ ಆದ್ರೆ?"
ನನ್ನ ಪ್ರೆಶ್ನೆ.
"ಅದು ಎಂತ ಮಾಡ್ತದೆ. ಹಾಗೆ ನಮಗೆ ಎಷ್ಟು ಸಿಗ್ತದೆ. ಅದರ ಪಾಡಿಗೆ ಅದು ಹೋಗ್ತದೆ. ಅದಕ್ಕೆ ಈಗ ಕಾಡಿನಲ್ಲಿ ಆಹಾರ ಇಲ್ಲ. ಹಾಗೆ ಇಲ್ಲಿ ಬದಿಯಲ್ಲಿ, ಶೆಟ್ರ ಮನೆಯ ಕೋಳಿಗೂಡಿಗೆ ಬರ್ತದೆ."
"ಏನ್ರಿ ಅದು, ಆಗಾಗ ಅಲ್ಲಿ ಕಾಣ್ತು, ಇಲ್ಲಿ ಕಾಣ್ತು ಅಂತೀರ, ನಿಮ್ಮ ಮನೆಗೆ ಬರಲಿಕ್ಕೆ ಹೆದ್ರಿಕೆ ಆಗ್ತದೆ ಮಾರಾರೆ"
ಅಂದೆ ನಾನು.
"ಹೆ ಹೆ .. ಹಾಗೆ ನೋಡಿದ್ರೆ ಬಹಳ ದಿನ ದಿಂದ ಒಂದು ಹಾವು ಅಲ್ಲಿ ಇಲ್ಲಿ ಕಾಣಿಸ್ತಿತ್ತು. ಮೊನ್ನೆ ಹೋದವಾರ, ಒಂದು ಸರ್ಪ, ಇಲ್ಲಿ ಬದಿಯ ಮನೆಯಲ್ಲಿ ಸತ್ತು ಬಿದ್ದಿತ್ತು. ನಾವು, ಅದೇ ಹಾವು ಸಾಯ್ತು ಅಂತ ಎಣಿಸಿದ್ವಿ..ಮತ್ತೆ ಅದಕೆ ನನ್ನ ಪಪ್ಪ, ಸಂಸ್ಕಾರ ಎಲ್ಲ ಮಾಡಿ, ಬೆಳ್ಳೀ ಚಿನ್ನ ಎಲ್ಲ ಇಟ್ಟು, ಹೊಸ ಬಟ್ಟೆ ಇಟ್ಟು ಮಣ್ಣು ಮಾಡ್ದ್ವಿ. ಆದರೆ ಅದರ ಜೋಡಿ ಹಾವು, ಇನ್ನೊಂದು ಅದನ್ನು ಹುಡುಕಿ ಬಂದಿದೆ ಅನ್ನಿಸ್ತದೆ, ಅದೇ ನನ್ನ ಮಗನಿಗೆ ಕಂಡಿದೆ."

1 comment:
namma orallay ethara kathe kayloke sigodu :) Naanu hogtha iddini baro vara :) Ashlesha bali namma maneli :)
Post a Comment