Friday, May 1, 2009

ಈ ಸಾರಿ ಸ್ವಲ್ಪ ಸಹನೀಯ ಬೇಸಿಗೆ

೧.ಓಟ್ ಹಾಕಿದ್ದಾಯಿತು
೨. ಸುನಂದಾ ಕಡಮೆಯವರ "ಪುಟ್ಟ ಪಾದದ ಗುರುತು" ಓದಿ ಮುಗಿಯಿತು. ಹೆಣ್ಣುತನವನ್ನ ಬಹಳ ಸುರಳೀತವಾಗಿ ಹೇಳಿ ಮನ ಮುಟ್ಟುತ್ತಾರೆ. ನಮ್ಮ ಲೇಖಕರ ಕಾಲ್ಪನಿಕ ಹೆಣ್ಣಿನ ಲೋಕದ ವಿವರಣೆ ಮದ್ಯ, ಸುನಂದಾ ಅವರ ಬಹಳ ಆತ್ಮೀಯವಾದ ಸ್ವಗತದಂತಹ ಬರವಣಿಗೆ ತುಂಬಾ ಇಷ್ಟವಾಯಿತು.
೩. ಊರಿಗೆ ಹೋಗಿದ್ದೆ. ಮಾವಿನ ಮರದ ತುಂಬಾ ಯಾರದೋ ಬಾಯಿ ರುಚಿ ಮೈನೆರೆದಂತೆ ಮಾವು. ನನ್ನದೇ ಜಾಗದಲ್ಲಿ, ನನ್ನದೇ ಮರದಲ್ಲಿ ಬಿಟ್ಟ ಅಷ್ಟೊಂದು ಮಾವಿನ ಹಣ್ಣುಗಳ ನೋಡಲಿಕ್ಕೇ ಏನೊ ಪುಳಕ. ಚಿಕ್ಕಂದಿನಲ್ಲಿ ಯಾರದೋ ಮರಕ್ಕೆ ಕಲ್ಲು ಹೋಡೆಯುತಿದ್ದದ್ದು ನೆನಪಾಯಿತು. ಕೈಗೆಟುಕು ವಂತಹ ಎತ್ತರದಲ್ಲೇ ಇದ್ದ ಹಣ್ಣಿಗೆ, ಮಗಳು ಸಣ್ಣ ಕಲ್ಲುಗಳಾರಿಸಿ ಹೊಡೆಯಹೋದಳು. ಅವರ ಅಮ್ಮ "ಏ ಬ್ಯಾಡ, ಹಣ್ಣು ಹಾಳಾಗುತ್ತೆ" ಅಂತ ಗದರಿದಳು. " ಇರಲಿ ಬಿಡು, ಮಕ್ಕಳು ಹಾಗೆ ಬೀಳಿಸಿ ತಿಂದರೇನೆ ಅದರ ಸುಖ" ಅಂತದ್ದೆ.
ಬೇರೆ ಬೇರೆ ಗಿಡ ಗಳನ್ನು ನೆಡಲು ಹೇಳಿಬಂದೆ. ದೊಡ್ಡದೊಂದು ಆಶ್ಚರ್ಯ ಅಂದ್ರೆ, ನಾವು ನಮ್ಮ ಜಾಗದಿಂದ ಹೊರಬರಬೇಕಾದ್ರೆ, ನಮ್ಮ ಬೇಲಿಗೆ ಅಂಚಿನಲ್ಲಿಯ ಮರದಲ್ಲಿ ಜೊಂಪೆ ಜೊಂಪೆ ನೇರಳೆ ಹಣ್ಣು. ಅದು ನೇರಳೆ ಮರ ಅಂತ ನನಿಗೆ ತಿಳಿದೇ ಇರಲಿಲ್ಲ. ಸಣ್ಣ ಸಂತಸ.
ಬರುವ ವರ್ಷಕ್ಕೆ ಒಂದು ದೇವ ಕಣಗಲೆ ಗಿಡ ಹಾಕಿಸಬೇಕು, ಬಾವಿಯ ಸುತ್ತ.
ಈ ಸಾರಿ ಸ್ವಲ್ಪ ಸಹನೀಯ ಬೇಸಿಗೆ. ಸಂಜೆಯಾದರೆ, ಹಳೆಯ ಗೆಳಯನಂತೆ ಸಣ್ಣ ಮಳೆ. ತಂಪಾದ ವಾತಾವರಣ. ಊರು ಚಂದ :)
೪. ನಾಳೆಯಿಂದ ಬೆಂಗಳೂರಿಗೆ ಹೊಂದಿ ಕೊಳ್ಳ ಬೇಕು. ಹೊಸದು ಕಲಿಯೋದು ಬಹಳ ಇದೆ. ಫೋಟೊಗ್ರಫಿ ಬೆಳೀತಾ ಇದೆ, ಹೊಸತನ್ನ ಕಲೀಬೇಕು.

1 comment:

Ravi said...

ಈ ಬಾರಿ ನಮ್ ಊರಿಗೆ ಹೋದಾಗ ಒಂದ್ ಎರಡು ಮಾವು, ನೇರಳೆ ನೆಟ್ಟು ಬರ್ತೀನಿ...ಮುಂದೊದು ೪- ೫ ವರ್ಷ ಬಿಟ್ಟು ಪುನಃ ಹೋದಾಗ ಅವುಗಳ ರುಚಿ ಸವಿ ಬಹುದು...ಅಲ್ಟೀಸ್ಟ್, ನಾವ್ ಅಲ್ದಿದ್ದ್ರೆ ಆ ಊರಿನ ಮಕ್ಳಾದ್ರೂ ತಿನ್ಲಿ
this blog inspired me this thought! Thanks :)

Related Posts with Thumbnails