
ಹಾಳು ಹಂಪಿ ಅಂತ ಹೇಳ್ತಾರೆ. ಹಂಪಿ ಜೊತೆ ಹಾಳು ಅನ್ನೊ ಪದ ಅನ್ವರ್ಥವಾಗಿ ಹೋಗಿದೆ. ಅದೇ ಹಂಪಿಯ ಆ ದೇವಸ್ಥಾನಗಳು, ಕಲ್ಯಾಣಿಗಳು, ಮಂಟಪಗಳು ಹದಿನೈದನೇ ಶತಮಾನದಲ್ಲಿ ಯಾವ ವೈಭವದಲ್ಲಿದ್ದಿರಬಹುದೆಂಬುದನ್ನು ನೆನಸಿ ಕೊಳ್ಳುವುದೇ ಒಂದು ಚಂದ. ಅಲ್ಲಿಯ ಗೈಡುಗಳು ಆ ವೈಭವನ್ನು ವರ್ಣಿಸುವುದನ್ನು ಕೇಳುವಾಗ ಸಣ್ಣದಾಗಿ ಕಲ್ಪನೆಗಳು ಗರಿಗೆದರುತ್ತವೆ. ಆ ದೇವಸ್ಥಾನಗಳ ಗೋಪುರ ಹರುಕು ಮುರುಕಲಾಗಿರದೆ, ಪೂರ್ಣ ಕಲಾವೈಭವದಿಂದ ನಿಂತಿದ್ದರೆ? ಅರಮನೆಯ ಗೋಡೆಗಳು ಇನ್ನೂ ನಿಂತಿದ್ದರೆ? ಹೀಗೆ ಏನೇನೋ ಪ್ರೆಶ್ನೆಗಳು.
ಹಾಗೆ ಅನ್ನಿಸಿದ್ದು ಅಲ್ಲಿಯ ಕಲ್ಯಾಣಿಯಲ್ಲಿ ನೀರು ತುಂಬಿ ಕಂಗೊಳಿಸುತ್ತಿದ್ದರೆ?ಅಂತ. ಅದೇ ಎಳೆ ಹಿಡಿದು ನಾನೇ ತೆಗೆದ ಒಂದು ಚಿತ್ರವನ್ನು ಕಲ್ಪನೆಯಕೈಗೆ ಕೊಟ್ಟು, ಹದಿನೈದನೇ ಶತಮಾನದಲ್ಲಿಟ್ಟು ನೋಡಿದೆ. ನನಗೆ ಕಂಡದ್ದು ಹೀಗೆ. :)
2 comments:
tumba chennagide!
ಸೊಗಸಾಗಿದೆ...ಹಾಳು ಹಂಪೆ ಗೆ ಕೊರಗದೆ ಈ ಎನ್ನ ಮನ ಅನ್ನೋ ಕವಿ ವಾಣಿ ನೆನಪಿಗೆ ಬಂತು
Post a Comment