Wednesday, February 11, 2009

ಕಿಂದರಿದಾಸನ ಪುಂಗಿಗೆ ತಲೆ ಆಡಿಸುವ ಇಲಿಗಳ ಹಾಗೆ,


"ಡೈಮಂಡ್ಸ್ ಆರ್ ಫಾರ್ ಎವರ್"
ಈ ಲೈನ್ ಓದಿದ ತಕ್ಷಣ ನಮ್ಮ ಮನಸ್ಸಿಗೆ ತಕ್ಷಣ ಬರುವ ಚಿತ್ರ ಏನು ಗೊತ್ತ? ಪ್ರೀತಿಸುತ್ತಿರುವ ಪ್ರೇಮಿಗಳಿಬ್ಬರು, ಕ್ಯಾಂಡಲ್ ಲೈಟ್ ನ ಮಂದ ಬೆಳಕಿನಡಿಯಲ್ಲಿ, ಒಂದು ಸಣ್ಣ ಡಬ್ಬಿಯಲ್ಲಿ ಉಂಗುರ ಹಿಡಿದೋ ಅಥವ ತಬ್ಬಿಕೊಂಡೋ ನಿಂತಿರುವ ಚಿತ್ರ. ಡೈಮಂಡಿಗೂ ಪ್ರೀತಿಗೂ ಅವಿನಾಭವ ಸಂಬಂಧ ಅಂತ ನಮ್ಮ ತಲೆಗೆ ಯಾವುದೋ ಕಾಲದಲ್ಲಿ ಹೊಕ್ಕಿ ಬಿಟ್ಟಿದೆ. ಹಾಗೆ ನೋಡಿದರೆ ಈ ಸ್ಲೋಗನ್ನಿನ ಅರ್ಥಕ್ಕೂ ಪ್ರೀತಿಗೂ ಯಾವ ಸಂಬಂಧವೂ ಇಲ್ಲ. ಡೈಮಂಡ್ ಇಲ್ಲದೇನೂ ಪ್ರೀತಿ ಮಾಡಬಹುದು ಮದುವೆ ಆಗ ಬಹುದು ಅದರೇ, ಅಮೇರಿಕಾ ಅಂತ ದೇಶದಲ್ಲಿ ಡೈಮಂಡ್ ಇಲ್ಲದೇ ಮದುವೆ ಆಗೋ ಹುಡುಗಿ ನಿಮ್ಮನ್ನ ಮೂಸಿ ಕೂಡ ನೋಡಲ್ಲ.
ಇದು ಜಗತ್ತಿನ ಸರ್ವಕಾಲಿಕ,ಅತಿ ಯಶಸ್ವಿ ಅಡ್ವರ್ಟೈಸಿಂಗ್ ಕ್ಯಾಂಪೈನ್ ನ ಸ್ಲೋಗನ್. ಎರಡನೆ ಮಹಾಯುದ್ದದ ಕೊನೆಯ ಸಮಯದಲ್ಲಿ ಡೈಮಂಡ್ ಉದ್ಯಮ ಸಂಕಷ್ಟದಲ್ಲಿತ್ತಂತೆ. ಬೇಡಿಕೆಗಿಂತ ಹೆಚ್ಚು ಡೈಮಂಡ್ ಅನ್ನು ನೆಲದಿಂದ ತೆಗೆದು, ಅದು ಮಾರಾಟವಾಗದೆ ಪರದಾಟವಾಗಿತ್ತಂತೆ. ಆಗ ಡೈಮಂಡ್ ಬ್ಯುಸಿನೆಸ್ಸಿನವರಿಗೆ ಕಣ್ಣಿಗೆ ಕಂಡದ್ದು, ಯುದ್ದ ಮುಗಿಸಿ ಹಿಂದಿರುಗಿ ಬಂದ ಅಸಂಖ್ಯಾತ ಯೋಧರು. ಅವರಲ್ಲಿ ಹಣವೂ ಇತ್ತು, ಮದುವೆಯ ವಯಸ್ಸೂ ಇತ್ತು. ಡೈಮಂಡಿನ ಸೈಜಿಗೂ ಅವರ ಯೋಗ್ಯತೆಗೂ ನಂಟು ಹುಟ್ಟಿಸಿ ಅವರು ಡೈಮಂಡ್ ಕೊಂಡು, ಅದನ್ನು ವಧುವಿಗೆ ಕೊಡುವುದು ಒಂದು ಸಂಪ್ರದಾಯವಾಗುವಂತೆ ಮಾಡಿದರು. ಅದಕ್ಕಾಗಿ ಹುಟ್ಟಿಕೊಂಡಿದ್ದು "ಡೈಮಂಡ್ಸ್ ಆರ್ ಫಾರ್ ಎವರ್" ಎಂಬ ಜಾಹೀರಾತು ತಂತ್ರ. ಇದರಿಂದ ದುಡ್ಡು ಮಾಡಿ ದುಂಡಗಾಗಿದ್ದು, ಬೆಲ್ಜಿಯಂ ನಲ್ಲಿದ್ದ ಯಹೂದಿ ವಜ್ರ ವ್ಯಾಪರಸ್ಥರು. ಅನ್ಯಾಯವಾಗಿದ್ದು ಡೈಮಂಡಿಗೆ ಹಣವಿಲ್ಲದೆ, ತನ್ನ ಪ್ರೇಮವನ್ನು ಒಳಗೇ ಇಟ್ಟು ಸುಟ್ಟಾ ಬಡ ಪ್ರೇಮಿಗೆ. ಆನಂತರ ಅಮೆರಿಕದ ಎಲ್ಲಾ ಆಚರಣೆಗಳು ಮಾರುಕಟ್ಟೆಯನ್ನು ಗಮನದಲ್ಲಿಟ್ಟು ಕೊಂಡೇ ರೂಪಿಸಲಾಯಿತು. ಅದರ ವಿಕೃತ ಕೂಸೇ ಪ್ರೇಮಿಗಳ ದಿನ ಅಥವ ವ್ಯಾಲಂಟೈನ್ಸ್ ಡೆ.
ವ್ಯಾಲಂಟೈನ್ಸ್ ಡೆ ದ ಅಕ್ಕ ಪಕ್ಕದ ದಿನಗಳಂದು ನಮ್ಮ ಬ್ಯುಸಿನೆಸ್ ಚಾನೆಲ್ ಗಳನ್ನು ನೋಡಿ. ನಾಳೆ ಎಷ್ಟು ಎಷ್ಟು ವ್ಯಾಪಾರವಾಗಬಹುದು, ನೆನ್ನೆ ಎಷ್ಟು ವ್ಯಾಪಾರವಾಯಿತು. ಎಷ್ಟು ಕೋಟಿ ಗುಲಾಬಿ ಯಾವ ದೇಶದಿಂದ ಯಾವದೇಶಕ್ಕೆ ಹೋಯಿತು ಇದೇ ಮುಂತಾದ ವಿಷ್ಲೇಶಣೆಗಳಿರುತ್ತವೆ. ಇಂತಹ ಒಂದು ವೆವಸ್ತಿಥ, ಪ್ರೇಮದ ವ್ಯಾಪಾರೀಕರಣ ಪೂರ ದುನಿಯಾದಲ್ಲಿ ನಡೆಯುವಹಾಗೆ ನೋಡಿಕೊಂಡಿದ್ದಾರೆ ಅಂದ್ರೆ ನಂಬಲಿಕ್ಕೆ ಆಗುವುದಿಲ್ಲ.
ಯಾವುದೊ ಕಿಂದರಿದಾಸನ ಪುಂಗಿಗೆ ತಲೆ ಆಡಿಸುವ ಇಲಿಗಳ ಹಾಗೆ, ಯಾರೋ ಯಾವುದೋ ದಿನಾಚರಣೆ ಮಾಡುತ್ತಾರೆ, ಅದರಂತೆ ನಾವು ಇನ್ನ್ಯಾರಿಗೋ ಗಿಪ್ಟೋ, ಕಾರ್ಡೋ ಕೊಡಲೇಬೇಕಂತೆ ಎಂದು ಸಮೂಹ ಸನ್ನಿಗೆ ಒಳಗಾಗುವ ನಮ್ಮ ಜನರಿಗೆ,ವಿಷ್ಲೇಶಣಾತ್ಮಕವಾಗಿ ಬುದ್ದಿ ಹೇಳುವವ ನೈತಿಕ ಸ್ಥೈರ್ಯ ಇರುವ ವೆಕ್ತಿ ನಮ್ಮ ನಡುವೆ ಇಲ್ಲದೇ ಇರುವುದು ದೊಡ್ಡ ದುರಂತ. ಇಂತಹ ಸಮಯದಲ್ಲಿ
ಮುತಾಲಿಕ್ ನಂತಹವರು ಹೇಳುವುದು[ಅವರವರ ಯೋಗ್ಯತೆಗೆ ಮೀರಿ ಮಾತಾಡಿದ್ರೆ ಯಾರು ಕೇಳ್ತಾರೆ, ಅದು ಬಿಡಿ] ಅವರ ರಾಜಕೀಯ ಹಿನ್ನೆಲೆಯೋ,ಧಾರ್ಮಿಕ ಹಿನ್ನೆಲೆಯೊ ಮುಂತಾದ ಕಾರಣದಿಂದಾಗಿ ಸಾರ ಸಗಟು ನಿರಾಕರಿಸಿ ಅವರಿಗೆ ಪಿಂಕ್ ಚೆಡ್ಡಿ ತೊಡಿಸಲು ಹೊರಡುತ್ತಾರೆ.
ನಿಜ ಏನಂದರೆ, ಇವೆಲ್ಲದರ ನಡುವೆ ಸತ್ಯ ಇದೆ. ಅದನ್ನು ಗುರುತಿಸುವುದು ನಮ್ಮ ಬುದ್ದಿವಂತಿಕೆಯನ್ನು ನಾವೇ ಪರೀಕ್ಷೆಗೆ ಹಚ್ಚುವ ಕೆಲಸವಾಗಿ ನಾವೇ ಮಾಡಬೇಕು. ಪ್ರತಿಯೊಬ್ಬರೂ.
ಮುತಾಲಿಕ್ ನಂತಹವರು ಹೇಳುವುದನ್ನು ಪಕ್ಕಕ್ಕೆ ಇಡುವ, ಸುಮ್ಮನೆ ಯೋಚನೆ ಮಾಡಿ, ದಿನವೂ ಲಲ್ಲೆಗರೆದು ಪ್ರೀತಿ ಮಾಡುತ್ತಲೇ ಇರುವ ಪ್ರೇಮಿಗಳು, ಅದೊಂದು ದಿನ ಉಡುಗೊರೆ ಕೊಡಲೇಬೇಕು, ಇನ್ನೆಲ್ಲೊ ರಾತ್ರಿಕಳೆಯಬೇಕು ಅನ್ನುವ ಇನ್ನೋಬ್ಬರು ಮಾಡುವ ಕೆಲಸವನ್ನು ಅನುಕರಿಸುವ ಅಗತ್ಯವೇನು? ಅದೊಂದು ದಿನ ಎಷ್ಟು ಕಾರ್ಡು, ಎಷ್ಟು ಟೆಡ್ಡಿಬೇರು, ಹೀಗೆ ಕಾಡು ಕಡಿಯುವ ಅಥವ ಗ್ಲೊಬಲ್ ವಾರ್ಮಿಂಗ್ ಹೆಚ್ಚಿಸುವ ಪ್ರಾಡಕ್ಟ್ ಗಳನ್ನು ನಮ್ಮ ನಮ್ಮಲ್ಲೆ ಹಂಚಿಕೋಂಡು, ಒಮ್ಮೆ ನೋಡಿ ಪಕ್ಕಕಿಡುವುದರಲ್ಲಿ ಏನು ಸುಖ? ನಾನು ಹೇಳುವುದರಲ್ಲಿ ನಂಬಿಕೆ ಇಲ್ಲವೆಂದರೆ ಈ ಲಿಂಕ್ Story of stuff ನೋಡಿ.
ನಮ್ಮ ಕೊಳ್ಳುವ,ಹಾಳು ಮಾಡುವ ಹಸಿವಿಗೆ, ಈ ಭೂಮಿ ಎಷ್ಟು ಬರಡಾಗಿದೆ ಅಂತ.

ಹಾಗೆ ತಮ್ಮ ಪ್ರೀತಿ ಇದೇ ದಿನ ತೋರಿಸಲೇಬೇಕೆಂದರೆ,
೧.ಒಂದು ಒಳ್ಳೆ ಹಾಡು ಹೇಳಿ, ಹೇಳಲು ಬರುವುದಿಲ್ಲ ಅಂದ್ರೆ ಆರುತಿಂಗಳು ಸಂಗೀತ ಕಲಿಯಿರಿ. ನಿಮಿಗೂ ಹೊಸವಿದ್ಯ ಲಬ್ಯ ನಿಮ್ಮ ಪ್ರೇಮಿಯೂ ಕುಷ್.
೨. ಒಂದು ಪೈಂಟಿಂಗ್ ಮಾಡಿ. ಅವಳಿಗಾಗಿಯೋ, ಅವನಿಗಾಗಿಯೋ ಎಷ್ಟು ಸಮಯ, ಪ್ರಿತಿಯಿಂದ ನೀವೇ ಖುದ್ದು ಮಾಡಿದ್ದನ್ನು ಕೊಡಿ.
೩. ಒಂದು ಕವಿತೆಯನ್ನೋ, ಕಾಗದವನ್ನೊ ನೀವೆ ಕೈಯಾರೆ ಬರೆಯಿರಿ[ನೆನಪಿರಲಿ..ಇಷ್ಟು ಮಾಡಲಿಕ್ಕೆ ನಿವು ಒಂದು ಅಷ್ಟು ಪುಸ್ತಕ ಓದಬೇಕು, ಒಳ್ಳೆ ಅಭಿರುಚಿ ಬೆಳಿಸಿಕೊಳ್ಳಬೇಕು. ಹೀಗೆ, ನೀವೂ ಬೆಳೆಯಬಹುದು.]. ಯಾವುದೋ ಕಾರ್ಡಿನಂಗಡಿಗೆ ಹೋಗಿ ಚೆನ್ನಾಗಿ ಬರೆದಿರುವ ಯಾವುದೋ ಕಾರ್ಡನ್ನು ದುಡ್ಡು ಕೊಟ್ಟು ತಂದರೆ ಏನು ಮಹ..ದುಡ್ಡಿದ್ದರೆಲ್ಲಾ ಮಾಡುವ ಸಾಮಾನ್ಯ ಕಾರ್ಯ ಇದು.
೪. ನಿಮ್ಮ ನಿಮ್ಮ ಪಂಗಡದ ಧಾರ್ಮಿಕ ಸ್ಥಳಗಳಿಗೆ ಹೋಗಿ, ಇನ್ನೂ ಎಷ್ಟೊ ವ್ಯಾಲಂಟೈನ್ಸ್ ಡೇ ಅನ್ನು ಜೋತೆಗೇ ಕಳೆಯುವ, ಒಬ್ಬರ್ನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸುಂದರ ಮಾಡಿಕೊಳ್ಳುವ ಪ್ರಾಥನೆಯೋ, ಪ್ರತಿಜ್ಞೆಯೋ ಮಾಡಿ.
೫.ನಿಮ್ಮದೇ ಭಾಷೆಯ, ಹಿರಿಯ ಕವಿಯ ಪುಸ್ತಕ ಉಡುಗೊರೆಯಾಗಿ ಕೊಡಿ..ಭಾಷೆ ಬೆಳೆಸಿರಿ. ಸಾದ್ಯವಿಲ್ಲವ?
ಪಬ್ಬಿಗೇ ಯಾಕೆ ಹೋಗಬೇಕು? ಯಾವ ಸಾಮಾನ್ಯಾರೂ ಅಲ್ಲಿಗೇ ಹೋಗುತ್ತಾರೆ...ನೀವೊ ಕೂಡ ಕಿಂದರಿದಾಸನ ಇಲಿ ಯಾಕೆ ಆಗ ಬೇಕು.ಸ್ವಲ್ಪ ಕಷ್ಟ ಅನ್ನಿಸೋದನ್ನೆ ಮಾಡಿ ನಿಮ್ಮ ಪ್ರೀತಿ ತೋರಿಸಿ, ನೀವೂ ಬೆಳೆಯಿರಿ. Raise in love, dont fall in love :)
ಪ್ರೀತಿ ಮಾಡ ಬೇಡ ಅಂತ ಯಾರೂ ಹೇಳಲು ಸಾದ್ಯವೇ ಇಲ್ಲ. ತನ್ನಿಂದ ತಾನೆ ಆಗೋದೇ ಪ್ರೀತಿ. ಅದಕ್ಕೆ ಒಂದು ಚಂದದ ಚೌಕಟ್ಟು ಕೊಟ್ಟು, ಆ ಪ್ರೀತಿ ನಮ್ಮಲ್ಲಿರುವ ಪೈಂಟರ್ ಅನ್ನೋ, ಕವಿಯನ್ನೋ, ಒಬ್ಬ ಒಳ್ಳೆ ಮನುಷ್ಯನನ್ನೋ,ಸಾದಕನನ್ನೂ ಹೊರಗೆ ತರಬೇಕು ಹಾಗೆ ಆ ಪ್ರೀತಿ ಆಚರಿಸಬೇಕು. ಇಲ್ಲ ಅಂದರೆ, ಯಾರನ್ನು ಸಂಪ್ರದಾಯಸ್ತರೂ ಅಂತ ಹೀಗಳೆದು ಅವರು ಹೇಳುವ ತಾಳಿಕಟ್ಟುವ ವಿಧಿಯನ್ನು ಗೊಡ್ಡು ಆಚರಣೆ, ಸ್ವಾತಂತ್ರ್ಯ ಹರಣೆ ಮಾಡುವ ಕಾರ್ಯ ಎನ್ನುವ ಮಂದಿ, ಇನ್ನ್ಯಾವುದೋ ಹೊರದೇಶದಲ್ಲಿ, ಕಾಣದೇ ಕುಳಿತಿರುವ ಚತುರ ವ್ಯಾಪರಸ್ಥರ ಹೊಸ, ನೈತಿಕತೆ ಇಲ್ಲದ ಸಂಪ್ರದಾಯಕ್ಕೆ ಗುಲಾಮರಾಗುತ್ತಿರುವುದು ಅವರ ಬುದ್ದಿ ಮತ್ತೆಯನ್ನೇ ಪ್ರಶ್ನಿಸುತ್ತದೆ.

3 comments:

Harisha - ಹರೀಶ said...

ವಿಶಿಷ್ಟ ಶೈಲಿಯಲ್ಲಿ ಬುದ್ಧಿ ಹೇಳಿದ್ದೀರಿ :-) ಕೊಟ್ಟಿರುವ ಟೈಟಲ್ ಕೂಡ ಚೆನ್ನಾಗಿದೆ

Ravi said...

i liked each of those 5 principle's you have stated. and i agree too.

Ravi said...

i liked each of those 5 principle's you have stated. and i agree too.

Related Posts with Thumbnails