Wednesday, February 4, 2009

ದೆವ್ವಾಗಳ ಬ್ಲಡ್ ಗ್ರೂಪ ಝಡ್ ನೆಗೆಟಿವ್

"ಅಪ್ಪಾ..."
"ಏನಮ್ಮಾ...?"
"ನಮ್ಮ ಸಾಗರಿಕ ಇದ್ದಳಲ್ಲ ಅವಳಿಗೆ ದೆವ್ವ ಬರುತ್ತಂತೆ..."
"ಉಮ್....[ಏನೋ ಮಾಡುತಿದ್ದವನು ತಕ್ಷಣ ಬೆಚ್ಚಿಬಿದ್ದು] ಹಾಂ? ಏನಂದೆ."
"ಹೌದಪ್ಪಾ...ಅವಳೇ ಹೇಳಿದ್ಳು...ಅವಳ ಕಣ್ಣು ಬೆಳಿಗ್ಗೆ ಎದ್ದ್ರೆ, ವೈಟ್ ಆಗಿರೋದೆಲ್ಲಾ ಬ್ಲಾಕ್ ಆಗ್ಬಿಡುತ್ತಂತೆ."
"ಹೇ...ನಿಗೆಲ್ಲೋ ಗೂಬೆ ಮಾಡಿರ್ಬೇಕು ಅವಳು...ಸುಮ್ನಿರು.... ಒಳ್ಳೆ ದ್ದುಪೆ ನೀನು" [ಪೆದ್ದು ಅಂತ ಡೈರೆಕ್ಟ್ ಆಗಿ ಬೈದ್ರೆ ಹೊಡಿಯಕ್ಕೆ ಬರ್ತಾಳೆ]

"ಅಪ್ಪಾ...ದೆವ್ವಾಗಳ ಬ್ಲಡ್ ಗ್ರೂಪ ಝಡ್ ನೆಗೆಟಿವ್ ಅಂತೆ ಹೌದ?"
"ಹ ಹ ಹ...ಯಾರೇ ಪುಟ್ಟಿ ಹೇಳಿದ್ದು?"
"ಹೌದಂತೆ ಅಪ್ಪ...ನನ್ನ ಫ್ರೆಂಡ್ಸ್ ಹೇಳಿದ್ರು"
"ಅಲ್ಲಾ ಪುಟ್ಟು...ದೆವ್ವನ ಗಾಳಿರೂಪದಲ್ಲಿ ತೋರಿಸ್ತಾರಲ್ಲಾ, ಕಾರ್ಟೂನ್ ನಲ್ಲಿ ಎಲ್ಲಾ..ನೊಡಿಲ್ಲವಾ? ಅದಕ್ಕೆ ರಕ್ತ ಯಾಕೆ ಬೇಕು ಹೇಳು"
"ಇಲ್ಲಾಪ್ಪಾ ಹೌದಂತೆ..."

"ಅಮೇಲೆ...ಲಂಡನ್ ನಲ್ಲಿ ಕಂಸನ್ನ ಹೂತಾಕಿದರಂತೆ...ನಿಜಾನ"
"ಉಮ್ಮ್...ಇದನ್ನ್ಯಾರ್ ಹೇಳಿದ್ರೆ ನಿಂಗೆ"
"ನನ್ನ ಫ್ರೆಂಡ್ಸು, ಎಲ್ಲಾ ದೆವ್ವಾಗಳೂ ಅವನೇ ಕಳಿಸೋದಂತೆ ಹೌದಾ..."
"ಏ ಪುಟ್ಟಿ...ತಲೆ ಕೆಟ್ಟಿದ್ಯಾ ನಿನ್ನ ಫ್ರೆಂಡ್ಸ್ ಗೆ....ಲಂಡನ್ ನಲ್ಲಿರೋ ದೆವ್ವಾ ಇಲ್ಲಿಗೆ ಬರಕ್ಕೆ ಆಗೋದೇಇಲ್ಲಾ ಗೊತ್ತಾ..ಅದಕ್ಕೂ ಪಾಸ್ ಪೋರ್ಟ್ ಬೇಕು."
"ಹೋಗಪ್ಪಾ ದೆವ್ವಕ್ಕೆ ಏನೂ ಬೇಕಿಲ್ಲಾ..."

"ರಾತ್ರಿ ಹೊತ್ತು, ನಾಯಿ...ಔ ಔ....ಅಂತ ಕೂಗತ್ತಲ್ಲಾ ಆಗ ನಾವದನ್ನ ಕೇಳಿಸ್ಕೊಂಡ್ರೆ ನಮ್ಮನ್ನ ದೆವ್ವ ಹಿಡ್ಕೋಳ್ಳುತ್ತಂತೆ."
"ಹ ಹ ಹ ...ಇಲ್ಲಾ ಕಣೇ...ಹಂಗೆಲ್ಲಾ ಅಗಲ್ಲಾ...ನಾಯಿಗೆ ಹೊಟ್ಟೆ ನೋವಿದ್ರೆ ಔ ಅಂತ ಕಿರುಚಿಕೊಳ್ಳುತ್ತೆ..ಅಷ್ಟೆ."
"ಹೋಗಪ್ಪಾ...ನಿಂಗೇನು ಗೊತ್ತಿಲ್ಲಾ..."

ನನ್ನ ಮಗಳು ಯವುದ್ಯಾವುದೋ ಹಾರರ್ ಪಿಕ್ಚರ್ ಗಳನ್ನ ಟೀವಿಯಲ್ಲಿ ನೋಡಿ ಅದನ್ನ ಅವರ ಫ್ರೆಂಡ್ಸ್ ಹತ್ತಿರ ಮಾತಾಡುವಾಗ ಅದು ಬ್ರಹ್ಮರೂಪ ತಾಳಿ.. ದಿನ ನನ್ನ ಹತ್ತಿರ ಬಂದು ಕೇಳೋ ಪ್ರೆಶ್ನೆಗಳ ಸರಮಾಲೆಗಳಲ್ಲಿ ಕೆಲವು..
ಹ ಹ ಹ...

4 comments:

ಮನಸ್ವಿ said...

ಹ ಹ್ಹಹ್ಹಾ.. ತುಂಬಾ ಚನ್ನಾಗಿದೆ... ಅಂದ ಹಾಗೆ ರಾತ್ರಿ ಹೊತ್ತಲ್ಲಿ ದೆವ್ವ ಬಿಳಿ ಸೀರೆ ಉಟ್ಗೊಂಡು ಓಡಾಡುತ್ತವೆಯಂತೆ(ಸಿನೆಮಾದಲ್ಲಿ ತೋರಿಸೋದು ಹೀಗೆ ಅಲ್ವಾ!) ಅವುಗಳ ಕಾಲಿನ ಪಾದ ಹಿಂದೆ ಮುಂದಾಗಿರುತ್ತವಂತೆ, ಹುಷಾರಾಗಿರಿ,ಕಾಲು ನೋಡೋಕೆ ಮರೆಯಬೇಡಿ... ಹೌದು ದೆವ್ವಕ್ಕೆ ವೀಸಾ ಬೇಡ್ವಾ? ಬರೀ ಪಾಸ್ ಪೋರ್ಟ್ ಇದ್ರೆ ಸಾಕಾ? ದೆವ್ವಗಳು ಈಗ ಮೊಬೈಲ್ ಬಳಸ್ತಾ ಇವೆಯಂತೆ,ಅವುಗಳ ಗ್ರಾಹಕ ಕೇಂದ್ರದ ನಂಬರುಗಳು 05489-05489 ಟೆಲ್ ಏರ್, 06889-06889 ಫೋನ್-ವಡಾ, 5634200049 ಎಲ್ಎನ್ಎಸ್ ಬಿ ಇಂತಾ ನಂಬರುಗಳಿಂದ ಕರೆ ಬಂದ್ರೆ ಎತ್ಬೇಡಿ.

Mahen said...

ರಿ ಮನಸ್ವಿ...ನೀವೇನ್ರಿ...ಏನೋ ತಮಾಷೆ ಮಾಡಿದ್ರೆ...ಫೊನ್ ನಂಬರ್ ಕೊಟ್ಬಿಟ್ರಲ್ಲಾ
ಹೆದ್ರಿಕೆ ಆಗುತ್ತೆ ಹ ಹ ಹ

Harisha - ಹರೀಶ said...

ಹಹ್ಹಾ! ಮಜವಾಗಿದೆ ..

~mE said...

:) hehe iduna heg miss madde antha gotilla :)dina ond ond lession haylikodthale alla simren :)

Related Posts with Thumbnails