Wednesday, January 28, 2009

ನಲವತ್ತು ಪರ್ಸೆಂಟ್ ಕಡಿಮೆ ಸೇಲ್

ಬ್ಲಾಗ್ ನಲ್ಲಿ ದೇಶವಿದೇಶಗಳ ಚರ್ಚೆ ನಡೆಯೋದು ಸಹಜ. ಎಲ್ಲಿ ಏನೇ ಆದ್ರೂ, ನಂದೂ ಒಂದಿರಲಿ ಅಂತ, ಬರೆದು ಅದನ್ನ ಪೋಷ್ಟ್ ಮಾಡೋದು ನಮ್ಮೆಲ್ಲರ ವೀಕ್ನೆಸ್ಸು. ಹಾಗೇನೆ, ನಮಿಗೆ ಗೊತ್ತಿರುವ ಚಿಕ್ಕ ಚಿಕ್ಕ ಇನ್ಫೊರ್ಮೇಷನ್ ಕೂಡ ಆ ಕ್ಷಣದಲ್ಲಿ ಹಂಚಿಕೊಂಡರೆ ಅದು ಹಲವರಿಗೆ ಉಪಯೋಗ ಆಗಬಹುದು. ಹಾಗೆ ಒಂದು ಚಿಕ್ಕ ಇನ್ಫೋರ್ಮೇಷನ್ ಏನಂದ್ರೆ, ರಿಬಾಕ್ ನಲ್ಲಿ ನಲವತ್ತು ಪರ್ಸೆಂಟ್ ಕಡಿಮೆ ಸೇಲ್ ನಡೀತಾಇದೆ.
ನನಗೆ ಬ್ರಾಂಡೆಡ್ ಬಟ್ಟೆಗಳ ಮೇಲೆ ಅಂತಹ ಮಮತೆ ಏನೂ ಇಲ್ಲ, ಎಲ್ಲಾದಕ್ಕೂ ಡಬಲ್ ಚಾರ್ಚ್ ಮಾಡಿ ಸುಲಿಗೆ ಮಾಡುತ್ತಾರೆ ಅಂತ ನನ್ನ ಕಂಪ್ಲೇಂಟು. ಇಂತಹ ಸೇಲ್ ಸಮಯದಲ್ಲಿ ಅವುಗಳಿಗೆ ನಿಜವಾಗಿ ಸಲ್ಲಬೇಕಾದ ದರದಲ್ಲಿ ಸಿಕ್ಕುತ್ತವಾದ್ದರಿಂದ, ತೀರಾ ಅಗತ್ಯವಾದ ಕೆಲವು ವಸ್ತುಗಳನ್ನು ತೆಗೊಳ್ಳೋದು ನನ್ನ ಅಬ್ಯಾಸ.
ಈ ತಿಂಗಳ ಕೊನೆಯವರೆಗೂ ಇರುವ ಈ ಸೆಲ್, ಚೆನ್ನಾಗಿದೆ. ನನಿಗೆ ಒಂದೆರಡು ಟ್ರಾಕ್ ಸೂಟ್ ಬೇಕಿತ್ತು, ಅದಕ್ಕೆ ತೆಗೊಳುವಾ ಅಂತ ಹೋಗಿದ್ದೆ, ವಿಷ್ಯ ನಿಮ್ಮೋಂದಿಗೆ ಹಂಚಿಕೊಳ್ಳುತಿದ್ದೇನೆ.

No comments:

Related Posts with Thumbnails