
ಜೋಗ ನೋಡಲಿಕ್ಕೆ ಹೋಗಿದ್ದೆ. ಅಲ್ಲಿಗೆ ಹೋಗುವ ಡೈರೆಕ್ಟ್ ಬಸ್ ಸಿಕ್ಕಲಿಲ್ಲ. "ಜೋಗದ ರೋಡ್ ನಲ್ಲಿ ನಿಲ್ಲಿಸ್ತೀವಿ ಸರ್, ಅಲ್ಲಿಂದ ಸ್ವಲ್ಪ ನಡೀಬೇಕು" ಅಂದ ಬಸ್ಸಿನವನು. ಒಳ್ಳೇದೆ ಆಯಿತು ಅಂತು ಮನಸ್ಸು. ದಾರಿಯಲ್ಲಿ, ಹಸಿರಿನ ಮದ್ಯ, ಮನಸ್ಸು ಏನಾದ್ರು ಚಿತ್ರ ಬಿಡಿಸಬಹುದು ಅಂತ ಬರವಸೆ ಇತ್ತು.
ಹಾಗೆ ಇಳಿದು ನಡೆಯುವಾಗ ಚುಮು ಚುಮು ಮಳೆ. ಶಾಲೆಗೆ ಹೋಗುವ ಇಬ್ಬರು ಮಕ್ಕಳು ಕೊಡೆ ಹಿಡಿದು ಹೊರಟಿದ್ದರು. ಕ್ಯಾಮರಕ್ಕೆ ಸಿಕ್ಕರು.
No comments:
Post a Comment