Thursday, June 5, 2008

ಕೈಯಲ್ಲಿರೊ ಚಿಕ್ಕ ಕರ್ಚಿಫನ್ನ
ಅ ಕೈನಿಂದ ಈ ಕೈಗೆ ಮಾಡ್ಕೊಂಡು
ಆತಂಕದಲ್ಲಿ ದಾರಿ ಕೊನೆ ನೊಡ್ಕೊಂಡು
ಈಗ ಬರ್ತಾನೆ ಆಗ ಬರ್ತಾನೆ ಅಂತ
ನಿಂತಿರೊ ಹುಡುಗಿ...
ಬಹಳ ತಡಮಾಡಿ ಅವನು ಬಂದ ತಕ್ಷಣ
ಹುಸಿಕೊಪ ಮಾಡಿ, ದೊಡ್ಡ ದೊಡ್ಡ್
ಮಾತಾಡಿ ಬೈದು...ತಣ್ಣಗಿನ ಕಣ್ಣೀರಿಂದ
ಅವನ ಎದೆ ಒದ್ದೆ ಮಾಡಿ ಸಮಾದಾನ
ಮಾಡ್ಕೊತಾಳಲ್ಲ....
ಹಾಗೆ...
ಅರಳೆ ಹತ್ತಿ ತರಹ ಇದ್ದ ಬಿಳಿ ಮೋಡ
ನೊಡ ನೊಡ್ತಾನೆ...ಕಪ್ಪು ಕಪ್ಪಾಗಿ
ಗುಡುಗು ಸಿಡಿಲಿನಿಂದ ಆರ್ಭಟಿಸಿ
ಹನಿ ಹನಿಯಿಂದ ದೊಡ್ಡಮಳೆಯಾಗೋದು ನೊಡಿದ್ರೆ ಅನ್ನಿಸುತ್ತೆ.....
ಯಾರನ್ನ ಕಾಯ್ತಾಇರತ್ತೊ...ಈ ಮಳೆ..

No comments:

Related Posts with Thumbnails