Thursday, April 28, 2011

ಬೇಸಿಗೆಯ ರಾತ್ರಿಯ ತೆಳು ಚಾದರದಂತೆ



ಬೇಸಿಗೆಯ ರಾತ್ರಿಯ ತೆಳು ಚಾದರದಂತೆ
ಇತ್ತೀಚಿನ ಸಂಭಂಧಗಳು
ಬೇಕೋ ಬೇಡವೋ ಬಳಿಯಲ್ಲಿ ಒಂದಿರಬೇಕು
ಮದ್ಯರಾತ್ರಿಯಲ್ಲಿ ತಣ್ಣಗಾದ ಕೊಠಡಿಯಲ್ಲಿ
ಕಾಣದೇ ಇದ್ದರೂ, ಕೈ ಚಾಚಲು ಒಂದು ಆಸರೆ
ಬಿಳೀ, ತೆಳೂ ಚಾದರ.
ವಯಸ್ಸಾದಾಗ ಒಂಟಿ ಎನಿಸಿದರೆ?...ಇರಲಿ
ನನ್ನೊಡನೊಂದು ಜೀವ
ಬಿಳೀ, ತೆಳೂ ಚಾದರದಂತೆ
ಏನನ್ನೂ ಹಿಂದಿರುಗಿ ಕೇಳದೆ,
ನಿತ್ಯವೂ ಬಳಿಯಿರಬೇಕೆಂದು ಕಾಡದೇ
ಕತ್ತಲಾದರೆ ಕೈ ಹಿಡಿದರಾಯಿತು
ಮತ್ತೆ ನಿನ್ನ ಅಗತ್ಯವೇನಿದೆ....
ಭೂಮಿ ಬಿಸಿ ಆಯಿತೊ..ಪ್ರೇಮ ಹುಸಿಯಾಯಿತೋ
ಗೋತ್ತಿಲ್ಲ.

No comments:

Related Posts with Thumbnails