೧.ಬಚ್ಚಿಟ್ಟುಕೊಂಡಾಗಲೆಲ್ಲಾ
ನಾನು ಕಳೆದು ಹೋಗುತ್ತಿದ್ದೆ
ಯಾಕೆಂದರೆ ಯಾರೂ
ನನ್ನನ್ನು ಹುಡುಕಿತ್ತಿರಲಿಲ್ಲ
೨.ಹತ್ತು ತೂತುಗಳಿದ್ದು, ನಿಟ್ಟುಸಿರು ಬಿಡಲೂ
ಕಲಿಯದ ಮೌನವಾದ ಕೊಳಲನ್ನು
ಅಕ್ಕರೆಯಿಂದ ಆರಿಸಿಕೊಂಡು ತಂದೆ.
೩.ನಿನ್ನ ಒಂಟಿತನವನ್ನು
ನನ್ನಲ್ಲಿ ಸುರಕ್ಷಿತವಾಗಿ
ಕಾಪಾಡುತಿದ್ದೇನೆ.
ನೀನು ಸ್ವೀಕರಿಸದ ನನ್ನ
ಒಂದೊಂದು ಸ್ವರ್ಶಗಳಿಂದ
ನಾನೂ ಒಂಟಿಯಾಗುತ್ತಿದ್ದೇನೆ.
ಇದು ಭಾನುವಾರ "ವಿಜಯಕರ್ನಾಟಕ" ದಲ್ಲಿ ಪ್ರಕಟವಾದ ಡಾ.ವೈಜಯಂತಿ ಯವರ ಕವಿತೆಗಳಿಂದ ಆಯ್ದ ಸಾಲುಗಳು. ಓದಿದಾಗ ಕುಷಿಯಾಯಿತು, ಎಲ್ಲೊ ಕಳೆದುಹೋಗುವ ಮುನ್ನ ಕೆಲವರೊಂದಿಗೆ ಹಂಚಿಕೊಳ್ಳುವ ಅನ್ನಿಸಿತು.
No comments:
Post a Comment