Thursday, April 2, 2009

ಅವರ "ಎಮೋಷನಲ್ ಅತ್ಯಾಚಾರ"ಕ್ಕೆ ಇವರೂ ಬಲಿ.


ನಿಮಿಗೆ ಬಂದಿರೊ ಎಲ್ಲ ಪೋಲಿ [MMS] ಎಮ್ ಎಮ್ ಎಸ್ ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿಕೊಂಡು, ಎಡಿಟ್ ಮಾಡಿ ಎರಡು ಹಾಡು ಸೇರಿಸಿದ್ರೆ ಬರೋ ರಿಸಲ್ಟು "ದೇವ್ ಡಿ". ಬಹಳ ಹಿಂದೆ ಬಿ.ವಿ.ಕಾರಂತರ ಬಗ್ಗೆ ಯಾರೋ ಸ್ವಾರಸ್ಯಕರವಾದ ಒಂದು ವಿಷಯ ಹೇಳ್ತಾ ಇದ್ರು. ಯಾವುದೋ ವಿಚಾರಕ್ಕೆ ಬಂದಾಗ "ರಿಯಲಿಟಿ ಅಂತೆ ರಿಯಾಲಿಟಿ...ಹಂಗತ್ತ ಸ್ಟೇಜ್ ಮೇಲೆ ಹೇಲೋದು ತೊರಿಸಕ್ಕಾಗುತ್ತೇನ್ರಿ?" ಅಂತ ಕೂಗಾಡಿದ್ರಂತೆ. ಸ್ವಲ್ಪ ಯೋಚನೆ ಮಾಡಿದ್ರೆ ಗೊತ್ತಾಗುತ್ತೆ, ಯಾಲ್ಲಾ ಮೀಡಿಯಾಗಳಿಗೂ ಒಂದು ಅಂದ ಚಂದ ಇರುತ್ತೆ. ಅದನ್ನ ಉಪಯೋಗಿಸಿ ಕೊಂಡು ಕತೆ ಹೇಳಿದ್ರೆ ಬಹಳ ಚೆನ್ನಾಗಿರುತ್ತೆ. ಇಲ್ಲಾ ಅಂದ್ರೆ...ಇಂಟೆಲೆಕ್ಚುವಾಲಿಟಿ ಹೆಸರಿನಲ್ಲಿ ಚಲನ ಚಿತ್ರದ "ಎಮೊಷನಲ್ ಅತ್ಯಾಚಾರ್" ನಡೆದು ಹೋಗುತ್ತೆ.
ಅನುರಾಗ ಕಷ್ಯಪ್..ಹಿಂದಿ ಚಿತ್ರರಂಗದ ಹೊಸ ಮುಖಗಳಲ್ಲಿ ಒಂದು ಅಂತ ಮೀಡಿಯಾದಲ್ಲಿ ಬಹಳ ಹೊಗಳಿಸಿಕೊಳ್ಳುತ್ತಿರುವ ನಿರ್ದೇಶಕ. ದೇವದಾಸನ ಕೆತೆ ತೆಗೆದು ಕೊಂಡು ತನ್ನದೇ ರೀತಿಯಾಲ್ಲಿ ಬದಲಾಯಿಸಿ, ಅದುನಿಕ ದೇವದಾಸನನ್ನ ಮಾಡಿದ್ದಾನೆ. ಆ ದೇವದಾಸನಿಗೂ ಅನುರಾಗ್ ಕಷ್ಯಪ್ ನ ದೇವದಾಸನಿಗೂ ಮೂಲಭೂತವಾಗಿ ಒಂದೇ ವ್ಯತ್ಯಾಸ ಅಂದ್ರೆ, ಅವನ ಕತೆ ಪ್ರೇಮ ಮತ್ತು ಅದರ ನಿರಾಕರಣದ ಸುತ್ತ ಸುತ್ತಿದರೆ, ಇದು "ದೇವ ಡಿ" ಕಾಮ ಮತ್ತು ಅದರ ಅನಾವರಣದ ಸುತ್ತ ಸುತ್ತುತ್ತದೆ. ಇದನ್ನ ಹೇಳಕ್ಕೆ ಆ ದೇವದಾಸನೇ ಯಾಕೆ ಬೇಕಿತ್ತು ಇವನಿಗೆ ಅಂತ ಗೊತ್ತಾಗುವುದಿಲ್ಲ.
ಅದುನಿಕತೆಯ ಹೆಸರಿನಲ್ಲಿ ಸಂಯಮ ಕಳೆದು ಕೊಳ್ಳುತ್ತಿರುವ ಯುವಜನತೆಗೆ, ಅಥವ ಅದುನಿಕತೆ ದಾರಿಯಲ್ಲಿ ಎಲ್ಲಿಗೆ ಹೊರಟಿದ್ದೀವಿ ಅನ್ನುವುದೇ ಗೊತ್ತಿಲ್ಲದ ಇತ್ತೀಚಿನ ಜನರೇಷನ್ನಿಗೆ ಇಂತ ಒಂದು ಚಿತ್ರ ಐಡೆಂಟಿಟಿ ಆಗಿ ಹೋಗಿ, ಅವರು ಅದನ್ನ "ಬದಾಲಾವಣೆ" ಅನ್ನೋ ಹೆಸರಿನಲ್ಲಿ, ಇದನ್ನ ಹೊಗಳಿದ್ರೆ ಅದು ಮುಂದುವರಿದವರ ಲಕ್ಷಣ ಅಂತ ತಿಳಿದು, ಚಿತ್ರದ ಪಾತ್ರಗಳೊಂದಿಗೆ ಗುರುತಿಸಿಕೊಂಡು ಎಂಜಾಯ್ ಮಾಡೋದು ನೋಡಿದ್ರೆ ಮುಂದೆ ಬರಬಹುದಾದ ಚಿತ್ರಗಳ ಬಗ್ಗೆ ಹೆದರಿಕೆ ಆಗ ಹತ್ತುತ್ತದೆ. ಸೆಕ್ಸ್ ಅನ್ನೋದನ್ನ ಆತುರ ಅವಸರ ಅನ್ನೋ ರೀತಿಯಲ್ಲಿ ಹಸಿ ಹಸಿಯಾಗಿ, ಗದ್ದೆ ಮದ್ಯ ತೋರಿಸ ಹೊರಡುವ ಅನುರಾಗ್ ಕಷ್ಯಪ್, ಅಕಸ್ಮಾತ "ಪರಿಣಿತ" ಏನಾದ್ರು ಚಿತ್ರ ಮಾಡಿದ್ರೆ, ಅಪ್ಪಟ ಬ್ಲೂ ಫಿಲಮ್ ಮಾಡಿಬಿಡ್ತಾನೇನೋ.
ಬಹಳ ಜನ ಕೇಳ್ತಾಇದ್ರು "ಹ್ಯಾವನ್ಟ್ ಯು ಸೀನ್ ದೇವ್ ಡಿ?" ಅಂತ, ಸರಿ ಇದ್ಯಾಕೋ ಮನೆಯವರೊಂದಿಗೆ ನೋಡೋ ಚಿತ್ರ ಅಲ್ಲವೇನೋ ಅನ್ನೊ ಡೌಟ್ ಇದ್ದ ನಾನು, ರಜಾ ಬಂದು ಅವರು ಊರಿಗೆ ಹೋದ ಮೇಲೆ ತಂದು ನೋಡಿದೆ. ಮುಗಿದ ಮೇಲೆ ಎರಡು ಪೆಗ್ ಎಕ್ಷಟ್ರಾ ಕುಡಿದು ಕಕ್ಕಿದ ಹಾಗಾಯಿತು.
ಕತೆಯಲ್ಲಿ ಹೊಸತನ, ಆ ಹೊಸತನಕ್ಕೆ ಬೇಕಾದ ಛಯಾಗ್ರಹಣ, ಹೀಗೆ ಎಲ್ಲವನ್ನ ಒಟ್ಟು ಗೂಡಿಸಿ ಹೊಸದನ್ನ ಕೊಡ್ತಾರೆ ಹಾಲಿವುಡ್ ಜನ. ಅದನ್ನ "ಬದಲಾವಣೆ" ಹೆಸರಲ್ಲಿ ನೋಡಬಹುದು. ಉದಾಹರಣೆಗೆ. "ಸಿಟಿ ಆಫ್ ಗಾಡ್ಸ್" "ಪರ್ಫ್ಯುಮ್" "ರನ್ ಲೋಲ ರನ್" ಹೀಗೆ. ಅನುರಾಗ್ ನ ದೇವ್ ಡಿ ಯಾಲ್ಲಿ ಕಾಣಿಸೋದು ಬರೀ ಕನ್‍ಫ್ಯುಶನ್. ಯಾವ ಪ್ಯಾರ ಮೀಟರ್ ಹಿಡಿದು ಇಂಥಹ ಚಿತ್ರಗಳನ್ನ ಹಾಗೆ, ಹೀಗೆ ಅಂತ ಹೊಗಳಿ ಜನಕ್ಕೆ ತಲುಪಿಸುತ್ತಾರೋ ಈ ವಿಮರ್ಷಕರೂ ಅಂತ ಯೋಚನೆ ಆಗುತ್ತದೆ. ರೋನಿ ಸ್ಕ್ರೂವಾಲ ಮೊದಲು ಮೀಡಿಯಾ ಒಡನಾಡಿ..ಅಲ್ಲೇ ಕೆಲಸ ಮಾಡುತಿದ್ದವ. ಅವನೇ ಇದಕ್ಕೆ ಪ್ರೊಡ್ಯುಸರ್, ಹಾಗಾಗಿ ಒಳ್ಳೆ ವಿಮರ್ಶೆ ಅವನಿಗೆ ಕಷ್ಟವೇನಲ್ಲ. ಆದ್ರೇ, ಮುಂಬೈನಂತಹ ನಗರದಲ್ಲಿ "ಉತ್ತಮ" ಅಂತ ಮುದ್ರೆ ಒತ್ತಿಸಿ ಕೊಂಡು ಬರುವ ಚಿತ್ರಗಳನ್ನು...ಇಡೀ ದೇಶ, ಬೆರಳೆತ್ತಿ ಪ್ರೆಶ್ನೆಯನ್ನೇಮಾಡದೆ ಒಪ್ಪಿಕೊಳ್ಳುವುದು ಒಂದು ಕೆಟ್ಟ ಬೆಳವಣಿಗೆ. ನನ್ನೂಬ್ಬ ಸ್ನೇಹಿತ ಇದ್ದಾನೆ. ಕುರ್ತಾ ಹಾಕಿ ರಂಗಶಂಕರಕ್ಕೆ ಹೊಗ್ತಾ ಇರ್ತಾನೆ. ಅವನು "ದೇವ್ ಡಿ" ನೋಡಿ ಬಂದ..."ಹೇಗಿದಿಯೋ?" ಅಂದೆ. ಕರ್ಚಿಫ್ ತೆಗೆದು ಮುಖ ಒರೆಸಿಕೊಳ್ಳುತ್ತಾ,ಎಲ್ಲಾ ಭಾವನೆಗಳನ್ನು ಮುಚ್ಚಿಹಕುತ್ತಾ..."ಏ ಚೆನ್ನಾಗಿದೆಯಪ್ಪಾ...ವೆರಿ ನೊಟೆಡ್ ಪಿಕ್ಛರೂ..ಎಷ್ಟು ಒಳ್ಳೆ ರಿವೀವ್ ಬಂದಿದೆ ಗೊತ್ತಾ" ಅಂತ ರಾಗ ಎಳೆದ. "ನಿನ್ನ ರಿವೀವ್ ಏನಪ್ಪಾ ಅಂದೆ" ಪೇಪರನಲ್ಲಿ ಓದಿದ್ದ ರಿವೀವ್ ಅನ್ನೆ ಪುನಃ ಪಟಿಸಲು ಶುರು ಮಾಡಿದ..ಸಾಕಪ್ಪ ಬಿಡು ಅಂದೆ. ಇದು ನಮ್ಮ ಇತ್ತೀಚಿನ ಜನರೇಷನ್ ಮಾಡುತ್ತಿರುವ ದೊಡ್ಡ ಕ್ರೈಮು. ಪಕ್ಕದ ಹತ್ತು ಮಂದಿ ಒಪ್ಪಿದಾರೇ ಅಂದ್ರೆ...ಅವರ "ಎಮೋಷನಲ್ ಅತ್ಯಾಚಾರ"ಕ್ಕೆ ಇವರೂ ಬಲಿ.
ಇದೆಲ್ಲಾದರ ಮದ್ಯ, "ಇಂತಿ ನಿನ್ನ ಪ್ರೀತಿಯ" ತೆಗೆದ ನಮ್ಮ ಸೂರಿ ಬಹಳ ಕುಷಿಯಾಗಿರಬೇಕು. ಕುಡಕನ್ನ ನನಗಿಂತ ಹೊಲಸಾಗಿ, ಕಾಮವನ್ನೂ ಸೇರಿಸಿ ಮಾಡಿದ್ದಾರೆ ನಾನೇ ಪರವಾಗಿಲ್ಲ ಅಂತ. ಹ ಹ ಹ ಹ...

ಅನುರಗ್ ಕಷ್ಯಪ್ ಎಲ್ಲಿಂದ ತನ್ನ ಚಲನ ಚಿತ್ರದ "ಲುಕ್" ಅನ್ನ ಕದ್ದಿದ್ದಾನೆ ಅಥವ ಮರ್ಯಾದೆಯಾಗಿ ಹೇಳಿದ್ರೆ, ಅಳವಡಿಸಿ ಕೊಂಡಿದ್ದಾನೆ ಅಂತ ಈ ವೀಡಿಯೊ ನೋಡಿ ತಿಳಿಯಿರಿ. "Smack my bitch up"

No comments:

Related Posts with Thumbnails