Tuesday, March 17, 2009

ಜಿಲೇಬಿ ತಣ್ಣಗಾಗ ಬಾರದಲ್ಲ :)

ಬಹಳ ದಿನ ಅಯಿತು...ಏನೇನೋ ಕೆಲಸಗಳು. ಎಷ್ಟೇ ಪ್ರಯತ್ನ ಪಟ್ಟರೂ ವತ್ತಡ ಅನ್ನೋದು ವತ್ತರಿಸಿಕೊಂಡು ಬಂದು ಸ್ವಲ್ಪ ಮನಸ್ಸನ್ನ ಅಲ್ಲಾಡಿಸಿಬಿಡತ್ತೆ. ಕನ್ನಡ ಚಿತ್ರರಂಗದ ಜನಪ್ರಿಯ ನಟಿಯೊಬ್ಬರ ವೆಬ್ ಸೈಟಿಗೆ ಅವರ ಚಿತ್ರಗಳನ್ನು ತೆಗೆದು ಕೊಟ್ಟೆ.
ಈ ಗೊಂದಲಗಳ ಮದ್ಯ ಬರೆಯಲಿಕ್ಕಿ ತಲೆಯಲ್ಲಿ ಏನೂ ಬರಲಿಲ್ಲ. ಏನನ್ನಾದರೂ ಓದಿದ್ದರೆ ತಾನೆ ಬರುವುದು.
ಎಲ್ಲಾ ಕೆಲಸ ಮುಗಿಸಿ ಮೊದಲು ಮಾಡಿದ ಕೆಲಸ ಹೊಸದೆರಡು ಪುಸ್ತಕ ತಂದಿದ್ದು. ಚಿತ್ತಾಲರ "ಕತೆಯಾದಳು ಹುಡುಗಿ" ಮತ್ತು ಜಯಂತರ "ಒಂದು ಜಿಲೇಬಿ".
ಜಿಲೇಬಿ ತಣ್ಣಗಾಗ ಬಾರದಲ್ಲ :) ಅದನ್ನೇ ಮೊದಲು ಹಿಡಿದೆ. ಓದಿ ಮುಗಿಸುವುದರಲ್ಲಿ ಎದೆಗೂಡಲೆಲ್ಲಾ ಒಂದು ಬೆಚ್ಚಗಿನ ಅನುಭವ.
ತುಂಬಾ ಸರಳವಾಗಿ, ಚಿಕ್ಕ ಚಿಕ್ಕ ಪದಗಳನ್ನೇ ಜೋಡಿಸಿ ಒಂದು ಸುಂದರ ಚಿತ್ರ ಬಿಡಿಸುತ್ತಾರೆ ಜಯಂತ. ಎಲ್ಲಾ ಕವಿತೆಗಳು ಅಷ್ಟು ಸುಲಲಿತವಾಗಿ ಅರ್ಥವಾಗುತ್ತದೆ ಎಂದು ನಾನು ಹೇಳುವುದಿಲ್ಲ. ಅರ್ಥವಾಗುವ ಕೆಲವು ಮನಸ್ಸು ಬಿಟ್ಟು ಅಲ್ಲಾಡುವುದಿಲ್ಲ.
ಉಧಾಹರಣೆಗೆ....
"ಅಡಿ ಟಿಪ್ಪಣಿ" ಪದ್ಯದಲ್ಲಿ ಬರುವ ಕೆಲವು ಲೈನುಗಳು.
ಕಾಮನಬಿಲ್ಲು : ಕಾಮಾಟಿಪುರದಲ್ಲಿ ಒಡೆವ ಬಳೆಗಳ ಚೂರು.
ಕವಿತೆ : ಸ್ವಂತ ವಿಳಾಸ ಇಲ್ಲದವ ಬರೆಯದ ಪತ್ರದ ಸಾಲು.
ಹಗಲು : ಬೇಕಾರ್ ಪೋರನ ಎದಿರು ಬಿದ್ದ ರದ್ದಿ ಪತ್ರಿಕೆ
ಓದಿ ಕುಷಿಯಾಯಿತು.
ತಲೆತಗ್ಗಿಸಿ, ಒಂದು ಸಿಲ್ಲಿಯಾದ ನೆಗೆಯನ್ನು ತುಟಿಯಂಚಿನಲ್ಲಿ ಸಿಕ್ಕಿಸಿಕೊಂಡು,ಮೊಬೈಲ್ ಫೊನ್ ನಲ್ಲಿ ಪ್ರೇಯಸಿಗೆ ಎಸ್ ಎಮ್ ಎಸ್ ಕಳಿಸುತ್ತಿದ್ದ ನನ್ನ ಗೆಳೆಯನಿಗೆ ಕೇಳಿದೆ "ಲೊ ಜಯಂತರ ಪುಸ್ತಕ ಓದ್ತೀಯೇನೊ? ಚೆನ್ನಾಗಿದೆ" ಅಂತ
"ಏ ನೀನೊಬ್ಬ.....ಯಾವದಾದ್ರು ಎರಡು ಪೋಲಿ ಜೊಕ್ಸ್ ಇದ್ರೆ ಫಾರ್ವಡ್ ಮಾಡು ಅದು ಬಿಟ್ಟು ಪುಸ್ತಕ ಓದಕ್ಕೆ ಟೈಮೆಲ್ಲಿದೆ"
ಅಂದ. ಅವನನ್ನ ಬಿಡಿ ನೀವು ಓದಿ. ಚೆನ್ನಾಗಿದೆ.

2 comments:

~mE said...

jilebi book yavdarabagge ?

Mahen said...

ಜಯಂತ ಕಾಯ್ಕಿಣಿ ಯವರ ಹೊಸ ಪುಸ್ತಕದ [ಕವನ ಸಂಕಲದ] ಹೆಸರು ಇದು ಶರಣ್ಯ.
"ಒಂದು ಜಿಲೇಬಿ" ಚೆನ್ನಾಗಿದೆ ಅಲ್ಲ? :)
ಇದರಲ್ಲಿ ಸಣ್ಣ ಸಣ್ಣ ಕವಿತೆಗಳಿವೆ.

Related Posts with Thumbnails