ನನ್ನ
ಅಮ್ಮನೊಂದಿಗಿನ ನನ್ನ ನೆನಪುಗಳು ಕಡಿಮೆಯೇ...
ಹಣೆಯಗಲದ ಕುಂಕುಮ
ಇಡುತಿದ್ದಳು,ಕೆನ್ನೆ ತುಂಬ ಅರಿಸಿನ ಹಚ್ಚಿರುತಿದ್ದಳು,
ಶುಭ್ರ ಸುಂದರ
ಕಾಟನ್ ಸೆರಗಿನಂಚಿನಲ್ಲಿ ಎಂದಿಗೂ ಬೆವೆರಿರುತಿದ್ದ ನನ್ನ ಮೂಗಿನ ತುದಿ
ವರೆಸಿ..."ಎಷ್ಟು
ಬೆವರ್ತೀಯೋ..." ಅನ್ನುತಿದ್ದಳು.
ನಾನವಳೊಂದಿಗೆ....
ಸಿನೇಮಾ ನೋಡಿದ್ದಾಗಲಿ,,ಹಬ್ಬಮಾಡಿದ್ದಾಗಲಿ
ನೆನಪಿಲ್ಲ
ಬಿಸಿಲಲ್ಲಿ ಆಡಿ
ಮೈ ಕೊಳೆ ಮಾಡಿಬಂದ ನನಗೆ ಆಕೆ ಗದರಿಸಿದ್ದು ನೆನಪಿಲ್ಲ
ಪರೀಕ್ಷೆಗೆ ಓದೂ
ಎಂದು ಅವಲತ್ತು ಕೊಂಡಿದ್ದು ನೆನಪಿಲ್ಲ
ಗೆಳೆಯರೊಡನೆ
ಸಿನೇಮಾ ನೋಡಿ ಬಂದಾಗ ತಪ್ಪೂ ಸರೀ ಹೇಳಿ ರಂಪ ಮಾಡಿದ್ದು ನೆನಪಿಲ್ಲ
ಹರೆಯದಲ್ಲಿ ಗೆಳತಿಯೊಡನೆ
ರಸ್ತೆಯ ಮೂಲೆ ಯಲ್ಲಿ ಮಾತಾಡುತಿದ್ದ ನನ್ನ ಕಂಡು
ಅವಳ್ಯಾರೋ? ಅಂದಿದ್ದು
ನೆನಪಿಲ್ಲ.
ಕೈ ಹಿಡಿದು ಮನೆಗೆ
ಕರೆತಂದಾಗ...ನಗು ನಗುತ್ತಾ ಒಳ ಕರತಂದಿದ್ದು ನೆನಪಿಲ್ಲ.
ತೀರ...ಸೋತು...ಮೈಬೆವೆತು
ಜ್ವರದಲ್ಲಿದ್ದಾಗಲೂ..ಹಣೆಗೆ ಒದ್ದೆ ಬಟ್ಟೆ ಇಟ್ಟದ್ದು ನೆನಪಿಲ್ಲ
ನಾನು ನಾಲ್ಕನೇ
ಕ್ಲಾಸಿನಲ್ಲಿದ್ದಾಗಲೇ ಹೋಗಿದ್ದಳವಳು..
ಅವಳಿಲ್ಲ ಅನ್ನುವ
ಕೊರತೆ ಒಂದು ಇಪ್ಪತ್ತು ವರ್ಷದ ನಂತರ ತುಂಬಿಕೊಟ್ಟಿದ್ದಾಳೆ...
ನನ್ನ ಮನೆಯಲ್ಲಿ
ಮಗಳಾಗಿದ್ದಾಳೆ...
ಹಠ ಮಾಡ್ತಾಳೆ...
ಮನೆಗೆ ಬಂದ ತಕ್ಷಣ...ಇಷ್ಟೊತ್ತು
ಎಲ್ಲಿಗೆ ಹೋಗಿದ್ದೆ ಯಾಕೆ ಲೇಟು ಅಂತ ದಬಾಯಿಸುತ್ತಾಳೆ..
ನಾನು ಊರಿಗೆ
ಹೊರಡುವೆನೆಂದರೆ....ಮೂರು ದಿನ ಕೊರಗುತ್ತಾಳೆ..
ಹಿಂದಿರುಗಿಬಂದ
ದಿನ..ಅಂದೇ ಕಂಡಂತೆ ನಾಚುತ್ತಾಳೆ...
ಅಮ್ಮ ಈಗೆಲ್ಲಿದ್ದಾಳೊ
ಅನ್ನುವ ಪ್ರೆಶ್ನೆ ನನಗಿನ್ನು ಏಳಲ್ಲ...
ಮನೆಯಲ್ಲೇ ಇದ್ದಾಳೆ...ಎರಡು
ಜಡೆ ಹಾಕುತ್ತಾಳೆ...
ಅಮ್ಮನ ದಿನದಂದು
ಅವಳಿಗೊಂದು ಶುಭಾಶಯ...